ಸ್ವಾಭಿಮಾನಿ ಮಾದಿಗ ಮಹಾಸಭಾ (ರಿ). ಕರ್ನಾಟಕ ರಾಜ್ಯದಲ್ಲಿರುವ ಹಲವು ದೊಡ್ಡ ಶೋಷಿತ ಸಮುದಾಯದಗಳಲ್ಲಿ ನಮ್ಮ ” ಮಾದಿಗ ಸಮುದಾಯವು” ಪ್ರಮುಖವಾದದ್ದು. ಸಂಖ್ಯಾ ಬಲದಲ್ಲಿ ನಾವು ಆಗ್ರ ಪಂಕ್ತಿಯಲ್ಲಿ ಇದ್ದರೂ, ಆರ್ಥಿಕವಾಗಿ , ಸಾಮಾಜಿಕವಾಗಿ, ಶಿಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಇತರೆ ಸಮುದಾಯಗಳಿಗಿಂತ ನಾವು ಹಿಂದೆ ಉಳಿದಿದ್ದೇವೆ. ಸಂವಿಧಾನ ನೀಡಿರುವ ಹಕ್ಕುಗಳನ್ನು ಪಡೆಯಲು , ನಮ್ಮ ಸಮುದಾಯವು ಎಲ್ಲಾ ರಂಗದಲ್ಲಿ ಪ್ರಾತಿನಿದ್ಯ ಹೊಂದಲು ಹಾಗೂ ಸಮುದಾಯದ ಜೀವನ ಗುಣ ಮಟ್ಟ ಸುಧಾರಿಸಲು ನಾವು ಒಗ್ಗಟಾಗ ಬೇಕಾದ ಅನಿವಾರ್ಯತೆ ನಮ್ಮೆದುರಿಗಿದೆ. ಪರಿಣಾಮಕಾರಿ ಸಂಘಟನೆ, ಯೋಜನಾ ಬದ್ಧ ಹೊರಟಾವು ಯಾವುದೇ ಸಮುದಾಯಕ್ಕೆ ಸಮರ್ಪಕ ನ್ಯಾಯ ಒದಗಿಸಬಲ್ಲದು ಎಂಬ ನಮ್ಮ ಸಮುದಾಯದ ದೃವ ತಾರೆಗಳಾದ ಡಾ|| ಬಿ ಆರ್ ಅಂಬೇಡ್ಕರ್, ಬಾಬು ಜಗ ಜೀವನ್ ರಾಮ್ ಹಾಗೂ ಪ್ರೊ ಬಿ ಕೃಷ್ಣಪ್ಪ ರವರ ಎಲ್ಲಾ ಹೋರಾಟಗಳಲ್ಲಿ ನಿರೂಪಿಸಿದ್ದಾರೆ. ನಮ್ಮ ಈ ” ತ್ರಿ ರತ್ನರ” ಹೋರಾಟದ ಆಶಯ, ಪ್ರೇರಣೆ ಹಾಗೂ ಮಾರ್ಗದರ್ಶನದಂತೆ ಮಾದಿಗ ಸಮುದಾಯ ಎಲ್ಲಾ ರಂಗದಲ್ಲೂ ಔನತ್ಯ ಸಾದಿಸುವ ನಮ್ಮ ಹಿರಿಯರ ಕನಸನ್ನು ನನಸು ಮಾಡುವ ಜವಾಬ್ದಾರಿ ಪ್ರಸ್ತುತ ಸಮುದಾಯದ ಮೇಲಿದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಸಮುದಾಯದ ಆಶಯ ಮತ್ತು ಬೇಡಿಕೆಗಳಿಗೆ ಆಸರೆಯಾಗಿ ನಿಲ್ಲುವ ವೇದಿಕೆಯೇ ” ಸ್ವಾಭಿಮಾನಿ ಮಾದಿಗ ಸಂಘಟನೆ” ಅಸ್ತಿತ್ವಕ್ಕೆ ಬಂದಿದೆ. ನಮ್ಮ ಸಮುದಾಯದ ಏಳಿಗೆ, ನಮ್ಮ ಸಂಘಟನೆಯಲ್ಲಿ ಅಡಗಿದೆ.